ग्रन्थपरिचयः

Rig Bhashya Part - 1

by Admin · संस्कृतम्

Rig Bhashya Part - 1 संस्कृतम् Featured
Free shipping in India on orders above ₹ 500
Authenticity guaranteed
7-day return on damaged or misprinted copies
संस्कृतम्

Rig Bhashya Part - 1

by Admin

In Stock

ಜಗದ್ಗುರುಗಳಾದ ಶ್ರೀಮದಾನಂದತೀರ್ಥ ಭಗವತ್ಪಾದಾಚಾರ್ಯರು ಋಗ್ವೇದದ ನಲವತ್ತು ಸೂಕ್ತಗಳಿಗೆ ಭಾಷ್ಯವನ್ನು ನೀಡಿರುವುದು ವಿದ್ವಾಂಸರಿಗೆ ತಿಳಿದ ವಿಷಯವೇ. ಈ ನಲವತ್ತು ಸೂಕ್ತಗಳ ವ್ಯಾಖ್ಯಾನದ ನೆಪದಲ್ಲಿ, ಸಂಪೂರ್ಣ ವೇದಭಾಗದ ಅಂತರಾರ್ಥವನ್ನೂ ಅವರು ಇಲ್ಲಿ ಸೂಚಿಸಿದ್ದಾರೆ ಎಂದು ಪಂಡಿತರು ಅರಿತಿದ್ದಾರೆ. ಅಪೂರ್ವವಾದ ಹಾಗೂ ಪ್ರಮಾಣಗಳಿಂದ ಸಮೃದ್ಧವಾದ ಈ ಋಗ್ವೇದ ಭಾಷ್ಯಕ್ಕೆ, ಪದ–ವಾಕ್ಯ–ಪ್ರಮಾಣಗಳ ಪಾರಂಗತರಾದ ಶ್ರೀಮತ್ಜಯತೀರ್ಥ ಮುನೀಂದ್ರರು ಟೀಕೆಯನ್ನು ರಚಿಸಿದ್ದಾರೆ. ಈ ಗಂಭೀರವಾದ ಟೀಕಾಗ್ರಂಥದ ಅಂತರಾರ್ಥವನ್ನು ಸ್ಪಷ್ಟಪಡಿಸುವ ಸಲುವಾಗಿ ಶ್ರೀ ಕಂಬಾಲೂರು ರಾಮಚಂದ್ರತೀರ್ಥ ಶ್ರೀಮಚ್ಚರಣರು ಟಿಪ್ಪಣಿಯನ್ನು ರಚಿಸಿದ್ದಾರೆ.
ಶ್ರೀ ರಾಮಚಂದ್ರತೀರ್ಥರು ಶ್ರೀಮಧ್ವ ಭಗವತ್ಪಾದಾಚಾರ್ಯರು ಅಧಿಷ್ಠಿತವಾದ ಸರ್ವಜ್ಞಪೀಠವನ್ನು ಅಲಂಕರಿಸಿದವರು. ಈ ಟಿಪ್ಪಣಿಯು, ಅಲ್ಲಲ್ಲಿ ಭಾಷ್ಯ ಹಾಗೂ ಟೀಕೆಯಲ್ಲಿ ಬಂದಿರುವ ಪದಗಳ ದೋಷರಹಿತತೆಯನ್ನು ನಿರೂಪಿಸುವುದಲ್ಲದೆ, ವ್ಯಾಕರಣಶಾಸ್ತ್ರದ ಪ್ರೌಢಿಮೆಯನ್ನೂ ಪ್ರಕಾಶಿಸುತ್ತದೆ.
ಸಂಪಾದಕರು : ಸಿ.ಆರ್. ಪ್ರದೀಪಸಿಂಹಾಚಾರ್ಯ
ಶ್ರೀಯುತ ಪ್ರದೀಪಸಿಂಹಾಚಾರ್ಯರು ನಾಡಿನ ಪ್ರಸಿದ್ಧ ಗುರುಕುಲಾವದ ಪೂರ್ಣಪ್ರಜ್ಞ ವಿದ್ಯಾಪೀಠದಲ್ಲಿ ಶಾಸ್ತ್ರಾಧ್ಯಯನವನ್ನು ನಡೆಸಿರುವರು. ಈ ಶತಮಾನದ ಗಣ್ಯಾತಿಗಣ್ಯಸಂತರಾದ ಶ್ರೀಶ್ರೀವಿಶ್ವೇತೀರ್ಥರಲ್ಲಿ ಶ್ರೀಮನ್ನ್ಯಾಯಸುಧಾಧ್ಯಯನವನ್ನು ನಡೆಸಿ ಗುರುಗಳ ವಿಶೇಷ ಕೃಪೆಗೆ ಪಾತ್ರರಾದವರು. ಹತ್ತಾರು ವರ್ಷದ ಪಾಠ ಪ್ರವಚನ ಗ್ರಂಥರಚನೆ ಹಾಗೂ ಗ್ರಂಥಗಳ ಅನುವಾದದ ಅನುಭವವು ಇವರಲ್ಲಿದೆ.

₹ 400 ₹ 480 Save 17%

Inclusive of all taxes

1

About this book