ग्रन्थपरिचयः

Shriman Nyayasudha (Part - 2)

by Admin · ಕನ್ನಡ

Shriman Nyayasudha (Part - 2) ಕನ್ನಡ Featured
Free shipping in India on orders above ₹ 500
Authenticity guaranteed
7-day return on damaged or misprinted copies
ಕನ್ನಡ

Shriman Nyayasudha (Part - 2)

by Admin

In Stock

(ಜಿಜ್ಞಾಸಾಧಿಕರಣ – ‘ನಾರಾಯಣಪ್ರಣಾಮಸ್ಯೇವ ಗುರುಪ್ರಣಾಮಸ್ಯಾಪಿ’ ಎಂಬ ವಾಕ್ಯದಿಂದ
‘ಭವೇದಯಂ ಗ್ರಂಥಕೃತೋsಭಿಪ್ರಾಯಃ’ ಎಂಬ ವಾಕ್ಯದವರೆಗೆ
(ನ್ಯಾಯಸುಧಾ-ಪ್ರತಿಪದಾರ್ಥ, ಸನ್ಯ್ನಾಯರತ್ನಾವಲಿ, ನಯಚಂದ್ರಿಕಾ, ಅನುವ್ಯಾಖ್ಯಾನಸಂಬಂಧದೀಪಿಕಾ,
ಪರಿಮಳ, ವಾಕ್ಯಾರ್ಥಚಂದ್ರಿಕಾ, ಕಾಶೀ, ಶ್ರೀನಿಧಿತೀರ್ಥೀಯ, ಕುಂಡಲಗಿರೀಯ, ಆನಂದ ಇತ್ಯಾದಿ
ಟೀಕಾ ಟಿಪ್ಪಣಿಗಳ ವಿಶೇಷಾಂಶಗಳೊಂದಿಗೆ)

ಶ್ರೀಮಠದ ಸಂಪ್ರದಾಯಪ್ರವರ್ತಕರೆಂದೇ ಪ್ರಸಿದ್ದರಾದವರು ಶ್ರೀ ಕಂಬಾಲೂರು ರಾಮಚಂದ್ರತೀರ್ಥರು. ಇವರು ಅನೇಕ ಕೃತಿಗಳನ್ನು ರಚಿಸಿದ್ದಾರೆ. ಅವುಗಳಲ್ಲಿ ಶ್ರೀಮನ್ನ್ಯಾಯಸುಧಾಟಿಪ್ಪಣಿಯೂ ಒಂದು. ಇಂತಹ ಶ್ರೀರಾಮಚಂದ್ರತೀರ್ಥರ ಬಗ್ಗೆ ಕುಂಡಲಗಿರಿಆಚಾರ್ಯರು ತಾವು ರಚಿಸಿದ ಶ್ರೀಮನ್ನ್ಯಾಯಸುಧಾಟಿಪ್ಪಣಿಯ ಮೊದಲಿಗೆ ಹೀಗೆ ಸ್ಮರಿಸಿದ್ದಾರೆ-
ಸ್ವಾದಿಮಾನಂ ಸುಧಾಯಾ ಯಃ ಸಮ್ಯಗ್ ಜ್ಞಾಪಿತವಾನ್ ಭುವಿ ।
ರಾಮಚಂದ್ರಗುರುಂ ನೌಮಿ ವಿದ್ವನ್ಮು ಕುಟಂಡನಮ್ ॥
ಎಂದು ನ್ಯಾಯಸುಧಾಸ್ವಾದವನ್ನು ಅನುಭವಿಸಬೇಕಾದರೆ ಶ್ರೀರಾಮಚಂದ್ರತೀರ್ಥರನ್ನು ಅವಶ್ಯ ಆಶ್ರಯಿಸಲೇಬೇಕು.

ವಿದ್ವಾನ್ ಕೃಷ್ಣಾಚಾರ್ಯರು ನ್ಯಾಯಸುಧಾಗ್ರಂಥದ ಕಾಶೀಟಿಪ್ಪಣಿ ಮೊದಲಾದ ಟಿಪ್ಪಣಿಗಳಲ್ಲಿರುವ ಬೇರೆ ಟಿಪ್ಪಣಿಗಳಲ್ಲಿ
ಹೇಳಿರದ ಪ್ರಮುಖವಿಷಯಗಳ ಕನ್ನಡಾನುವಾದವನ್ನು ಮಾಡಿದ್ದಾರೆ. ಈ ಅನುವಾದದ ಜೊತೆಗೆ ಪಾತಂಜಲಮಹಾಭಾಷ್ಯ, ವಾಕ್ಯಪದೀಯ, ಪ್ರಕ್ರಿಯಾಕೌಮುದೀ, ಕಾಶಿಕಾವೃತ್ತಿ ಈ ಗ್ರಂಥಗಳಲ್ಲಿರುವ ವಿಷಯಗಳನ್ನು ಬಳಸಿಕೊಂಡು ವಿಷಯಗಳ ವಿಮರ್ಶೆ- ವಿಶ್ಲೇಷಣೆಗಳನ್ನು ಮಾಡಿದ್ದಾರೆ.
ಪೂರ್ವಮೀಮಾಂಸಾವಿಷಯಗಳನ್ನು ಶಾಬರಭಾಷ್ಯ, ಮೀಮಾಂಸಾನುಕ್ರಮಣಿಕಾ, ಭಾಟ್ಟ-ಸಂಗ್ರಹ ಮುಂತಾದ ಗ್ರಂಥಗಳನ್ನು ಗಮನಿಸಿ ಅವುಗಳ ಬೆಳಕಿನಲ್ಲಿ ಅನುವಾದವನ್ನು ಮಾಡಿದ್ದಾರೆ.
ಗೌತಮನ್ಯಾಯಸೂತ್ರ, ವಾತ್ಸ್ಯಾಯನಭಾಷ್ಯ, ಮುಕ್ತಾವಲೀ ಮತ್ತು ಗದಾದರಭಟ್ಟರ ವ್ಯುತ್ಪತ್ತಿವಾದಗಳನ್ನು ಪರಿಶೀಲಿಸಿ ವಿವರಿಸಿದ್ದಾರೆ. ಟಿಪ್ಪಣಿಗಳಲ್ಲಿ ಪ್ರಸ್ತುತವಾದ ವೇದಮಂತ್ರ, ಭಾಗವತಪುರಾಣ ಮೊದಲಾದವುಗಳ ಶ್ಲೋಕಗಳು – ಇವುಗಳ ಪೂರ್ಣಪಾಠವನ್ನು ಬರೆದು, ಅವುಗಳ ಸಂದರ್ಭ ವಿವರಣೆಯೊಂದಿಗೆ ವಿವರಿಸಿದ್ದಾರೆ
ಅನುವ್ಯಾಖ್ಯಾನ ಮತ್ತು ನ್ಯಾಯಸುಧಾ ವಾಕ್ಯಗಳ ಪ್ರತಿಪದಗಳ ಅರ್ಥವನ್ನು ಬರೆದು ಆ ವಾಕ್ಯಗಳ ಸಾರವನ್ನು ವಿವರಿಸಿದ್ದಾರೆ.

₹ 650 ₹ 780 Save 17%

Inclusive of all taxes

1

About this book